ಕೊಡಗಿನಲ್ಲಿ ಆಳಿದ ಹಾಲೇರಿ ವಂಶದ ಅರಸು (1775-80). ಮುದ್ದುರಾಜನ ಸೋದರ. 1770ರಲ್ಲಿ ಮುದ್ದುರಾಜ ತೀರಿಕೊಂಡ.  ಅವನ ಮಗ ಲಿಂಗರಾಜೇಂದ್ರ ೧.

ಕೊಡಗಿನಲ್ಲಿ ಆಳಿದ ಹಾಲೇರಿ ವಂಶದ ಅರಸು (1775-80). ಮುದ್ದುರಾಜನ ಸೋದರ. 1770ರಲ್ಲಿ ಮುದ್ದುರಾಜ ತೀರಿಕೊಂಡ.  ಅವನ ಮಗ ಅಪ್ಪಾಜಿರಾಜನಿಗೆ ಪಟ್ಟವೇರಲು ಅವಕಾಶ ಕೊಡದೆ ಕಿರಿಯ ಹೊರಮತಿಶಾಲೆಯ ದೇವಪ್ಪರಾಜನಿಗೆ ಪಟ್ಟವಾದಾಗ ಲಿಂಗರಾಜ ತನ್ನ ಅಣ್ಣನ ಮಗ ಅಪ್ಪಾಜಿರಾಜನ ಪರ ಹೈದರ್ ಅಲಿಯ ಹಸ್ತಕ್ಷೇಪವನ್ನು ಯಾಚಿಸಿದ. ಕೊಡಗನ್ನು ಗೆಲ್ಲಲು ಹಾತೊರೆಯುತ್ತಿದ್ದ ಹೈದರ್ ಈ ಅಂತಃಕಲಹದ ಲಾಭಪಡೆದು 1773ರಲ್ಲಿ ಕೊಡಗನ್ನು ಗೆದ್ದು ಅಪ್ಪಾಜಿರಾಜನಿಗೆ ಸಿಂಹಾಸನವೇರಲು ನೆರವಾದ. ಮುಂದೆ ಅಪ್ಪಾಜಿ ರಾಜ ನಿಧನ ಹೊಂದಲು 1775ರಲ್ಲಿ ಲಿಂಗರಾಜನಿಗೇ ಪಟ್ಟವಾಯಿತು. ಹೈದರನ ನೆರವಿನಿಂದ ಮಲಬಾರಿನ ವೈನಾಡು ಪ್ರದೇಶವನ್ನು ಗೆದ್ದುಕೊಂಡ. ಪ್ರತಿಯಾಗಿ ಹೈದರನಿಗೆ ವರ್ಷಕ್ಕೆ 24,000 ರೂ.ಗಳನ್ನು ಆತನ ದಂಡಯಾತ್ರೆಯ ವೆಚ್ಚವಾಗಿ ನೀಡಲು ಒಪ್ಪಿಕೊಂಡ. ವಾಸ್ತವವಾಗಿ ಈ ಕೊಡುಗೆ ಕಪ್ಪದ ಸ್ವರೂಪವನ್ನೇ ಪಡೆಯಿತು. 1779ರಲ್ಲಿ ಕೇರಳದ ಕೋಟೆಯ ಅರಸ ವೈನಾಡನ್ನು ಮತ್ತೆ ಗೆದ್ದುಕೊಂಡನಲ್ಲದೆ, ಅದನ್ನು ರಕ್ಷಿಸಲು ಲಿಂಗರಾಜ ಕಳುಹಿಸಿದ್ದ ಸೇನೆಯನ್ನು ಸೋಲಿಸಿ, ಅದರ ಜೊತೆ ಬಂದಿದ್ದ ಇಬ್ಬರು ಕೊಡಗಿನ ರಾಜಕುಮಾರರನ್ನೂ (ಅಪ್ಪಾಜಿರಾಜನ ಮಕ್ಕಳು) ಕೊಂದ.  ಇದಾಗಿ ಅಲ್ಪಕಾಲದಲ್ಲೆಯೇ, 1780 ಫೆಬ್ರವರಿಯಲ್ಲಿ ಲಿಂಗರಾಜ ತೀರಿಕೊಂಡ. ಈತನನ್ನು ಮಾದಾಪುರದಲ್ಲಿ (ಸೋಮವಾರ ಪೇಟೆ ತಾಲ್ಲೂಕು) ಸಮಾಧಿ ಮಾಡಲಾಯಿತು. ಈತನ ಮಕ್ಕಳಾದ ವೀರರಾಜ ಮತ್ತು ಲಿಂಗರಾಜೇಂದ್ರರು ವಯಸ್ಸಿನಲ್ಲಿ ತೀರ ಚಿಕ್ಕವರೆಂಬ ನೆಪ ಒಡ್ಡಿ ಹೈದರ್ ಕೊಡಗಿನ ಆಡಳಿತವನ್ನು ತಾನೇ ವಹಿಸಿಕೊಂಡು ಕರಣಿಕ ಸುಬ್ಬರಸಯ್ಯನನ್ನು ಅಮಲ್ದಾರನಾಗಿ ಮಡಿಕೇರಿಯಲ್ಲಿ ನೇಮಿಸಿದ. 	
										
ಅಪ್ಪಾಜಿರಾಜನಿಗೆ ಪಟ್ಟವೇರಲು ಅವಕಾಶ ಕೊಡದೆ ಕಿರಿಯ ಹೊರಮತಿಶಾಲೆಯ ದೇವಪ್ಪರಾಜನಿಗೆ ಪಟ್ಟವಾದಾಗ ಲಿಂಗರಾಜ ತನ್ನ ಅಣ್ಣನ ಮಗ ಅಪ್ಪಾಜಿರಾಜನ ಪರ ಹೈದರ್ ಅಲಿಯ ಹಸ್ತಕ್ಷೇಪವನ್ನು ಯಾಚಿಸಿದ. ಕೊಡಗನ್ನು ಗೆಲ್ಲಲು ಹಾತೊರೆಯುತ್ತಿದ್ದ ಹೈದರ್ ಈ ಅಂತಃಕಲಹದ ಲಾಭಪಡೆದು 1773ರಲ್ಲಿ ಕೊಡಗನ್ನು ಗೆದ್ದು ಅಪ್ಪಾಜಿರಾಜನಿಗೆ ಸಿಂಹಾಸನವೇರಲು ನೆರವಾದ. ಮುಂದೆ ಅಪ್ಪಾಜಿ ರಾಜ ನಿಧನ ಹೊಂದಲು 1775ರಲ್ಲಿ ಲಿಂಗರಾಜನಿಗೇ ಪಟ್ಟವಾಯಿತು. ಹೈದರನ ನೆರವಿನಿಂದ ಮಲಬಾರಿನ ವೈನಾಡು ಪ್ರದೇಶವನ್ನು ಗೆದ್ದು ಕೊಂಡ. ಪ್ರತಿಯಾಗಿ ಹೈದರನಿಗೆ ವರ್ಷಕ್ಕೆ 24,000 ರೂ.ಗಳನ್ನು ಆತನ ದಂಡಯಾತ್ರೆಯ ವೆಚ್ಚವಾಗಿ ನೀಡಲು ಒಪ್ಪಿಕೊಂಡ. ವಾಸ್ತವವಾಗಿ ಈ ಕೊಡುಗೆ ಕಪ್ಪದ ಸ್ವರೂಪವನ್ನೇ ಪಡೆಯಿತು. 1779ರಲ್ಲಿ ಕೇರಳದ ಕೋಟೆಯ ಅರಸ ವೈನಾಡನ್ನು ಮತ್ತೆ ಗೆದ್ದುಕೊಂಡನಲ್ಲದೆ, ಅದನ್ನು ರಕ್ಷಿಸಲು ಲಿಂಗರಾಜ ಕಳುಹಿಸಿದ್ದ ಸೇನೆಯನ್ನು ಸೋಲಿಸಿ, ಅದರ ಜೊತೆ ಬಂದಿದ್ದ ಇಬ್ಬರು ಕೊಡಗಿನ ರಾಜಕುಮಾರರನ್ನೂ (ಅಪ್ಪಾಜಿರಾಜನ ಮಕ್ಕಳು) ಕೊಂದ.  ಇದಾಗಿ ಅಲ್ಪಕಾಲದಲ್ಲೆಯೇ, 1780 ಫೆಬ್ರವರಿಯಲ್ಲಿ ಲಿಂಗರಾಜ ತೀರಿಕೊಂಡ. ಈತನನ್ನು ಮಾದಾಪುರದಲ್ಲಿ (ಸೋಮವಾರ ಪೇಟೆ ತಾಲ್ಲೂಕು) ಸಮಾಧಿ ಮಾಡಲಾಯಿತು. ಈತನ ಮಕ್ಕಳಾದ ವೀರರಾಜ ಮತ್ತು ಲಿಂಗರಾಜೇಂದ್ರರು ವಯಸ್ಸಿನಲ್ಲಿ ತೀರ ಚಿಕ್ಕವರೆಂಬ ನೆಪ ಒಡ್ಡಿ ಹೈದರ್ ಕೊಡಗಿನ ಆಡಳಿತವನ್ನು ತಾನೇ ವಹಿಸಿಕೊಂಡು ಕರಣಿಕ ಸುಬ್ಬರಸಯ್ಯನನ್ನು ಅಮಲ್ದಾರನಾಗಿ ಮಡಿಕೇರಿಯಲ್ಲಿ ನೇಮಿಸಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ